ಗ್ಯಾಡೊಲಿನಿಯಮ್ -
	ವಿರಳ ಭಸ್ಮ ಧಾತುಗಳಲ್ಲೊಂದು; ಆವರ್ತ ಕೋಷ್ಟಕದ 3 ನೆಯ ಗುಂಪಿನಲ್ಲಿದೆ (ಲ್ಯಾಂಥನೈಡ್). ಬೆಳ್ಳಿಯಂತೆ ಬಿಳುಪಾದ ತನ್ನ (ಡಕ್ಟೈಲ್) ಲೋಹವಿದು. ಆಮ್ಲಜನಕ ಮತ್ತು ನೀರುಗಳೊಡನೆ ಇದರ ವರ್ತನೆ ನಿಧಾನ. 180 ಸೆಂ.ಗಿಂತಲೂ ಕಡಿಮೆ ಉಷ್ಣತೆಯಲ್ಲಿ ಫೆರ್ರೊಕಾಂತ (ಫೆರೋಮ್ಯಾಗ್ನೆಟಿಕ್) ಅತಿ ಶೀತಾವಸ್ಥೆಯಲ್ಲಿ ಇದು ಅಧಿವಾಹಕ. ದ್ರವನ ಬಿಂದು 13120 ಸೆಂ. ಷಟ್ಕೋನಾಕೃತಿಯ ಸಾಂದ್ರತೆ 7.895. ರಾಸಾಯನಿಕ ಪ್ರತೀಕ ಉಜ. ಪರಮಾಣು ತೂಕ 157.25. ಪರಮಾಣು ಸಂಖ್ಯೆ 64 ಪರಮಾಣು ತೂಕ 152, 154, 155, 156, 157, 158 ಮತ್ತು 160 ಇರುವ ಐಸೊಟೊಪುಗಳನ್ನು ಶೋಧಿಸಲಾಗಿದೆ. ಗ್ಯಾಡೊಲಿನಿಯಮಿನ ಎಲ್ಲ ಸಂಯುಕ್ತಗಳಲ್ಲೂ ದ್ರಾವಣಗಳಲ್ಲೂ ಇದರ ವೇಲೆನ್ಸಿ 3. ಇದರ ಎಲೆಕ್ಟ್ರಾನಿಕ್ ವಿನ್ಯಾಸ 1s2, 2s2, 2ಠಿ6, 3s2 3ಠಿ6 3ಜ10 4s2 4ಜ10 4ಜಿ7 5s2 5ಠಿ6 4ಜ1 6s2. ವಿರಳ ಭಸ್ಮಧಾತುಗಳ ಗುಂಪಿನ ಸದಸ್ಯ ಧಾತುವಾಗಿರುವ ಗ್ಯಾಡೊಲಿನಿಯಮ್ ರಾಸಾಯನಿಕ ಗುಣಲಕ್ಷಣಗಳಲ್ಲಿ ಅವನ್ನು ಪರಸ್ಪರ ಬಹಳವಾಗಿ ಹೋಲುವುದು. ಇದು ಬಿಳಿ ಆಕ್ಸೈಡನ್ನೂ ಬಣ್ಣವಿಲ್ಲದ ಲವಣಗಳನ್ನೂ ಪಡೆದಿದೆ. ಇದರ ದ್ರಾವಣಗಳು ನಿರ್ವರ್ಣ. ಗ್ಯಾಡೊಲಿನಿಯಮ್ ಅಯಾನಿನ ತ್ರಿಜ್ಯ 0.938 Å.   ಅಯಾನಿಗೆ ರೋಹಿತದ ಅತಿನೇರಿಳೆ ಪ್ರದೇಶದಲ್ಲಿ ಹೀರುವ ಹಂತಗಳು ಇರುವುದರಿಂದ ಇದನ್ನು ವಿಶ್ಲೇಷಣೆಗೆ ಅಳವಡಿಸಕೊಳ್ಳಬಹುದು. ಅಯುಗ್ಮ ಎಲೆಕ್ಟ್ರಾನುಗಳನ್ನು ಪಡೆದಿರುವುದರಿಂದ ಇದರ ಅಯಾನು ಪ್ರಬಲ ಅನುಕಾಂತತೆಯನ್ನು ತೋರಿಸುವುದು.

ಈ ಧಾತುವನ್ನು ಆವಿಷ್ಕರಿಸಿದ ಕೀರ್ತಿ ಜೆ.ಸಿ.ಜಿ. ಡ ಮ್ಯಾರಿಗ್ನಾಕ್ ಮತ್ತು ಪಿ.ಇ.ಎಲ್. ಡ ಬಾಯ್ಸಿ ಬಾಡ್ರಾನ್ ಎಂಬ ಇಬ್ಬರು ವಿಜ್ಞಾನಿಗಳಿಗೆ ಸಲ್ಲುತ್ತದೆ. ಡ ಮ್ಯಾರಿಗ್ನಾಕ್ 1880 ರಲ್ಲಿ ಸಮರ್‍ಸ್ಕೈಟಿನಿಂದ ಹೊಸ ವಿರಳ ಭಸ್ಮಧಾತು ಒಂದನ್ನು ಬೇರ್ಪಡಿಸಿದ. 1886 ರಲ್ಲಿ ಬಾಯ್ಸಿಬಾಡ್ರಾನ್ ಅದರದೇ ಸಾಕಷ್ಟು ಶುದ್ಧವಾದ ಪದಾರ್ಥಗಳನ್ನು ತಯಾರಿಸಿದ. ಫಿನ್‍ಲೆಂಡನ ಖ್ಯಾತ ರಸಾಯನ ವಿಜ್ಞಾನಿ ಜೆ. ಗ್ಯಾಡೊಲಿನನ ಗೌರವಾರ್ಥ ಆ ಧಾತುವಿಗೆ ಗ್ಯಾಡೊಲಿನಿಯಮ್ ಎಂದೂ ಧಾತುವಿನ ಆಕ್ಸೈಡಿಗೆ ಗ್ಯಾಡೊಲಿನವೆಂದೂ ಮ್ಯಾರಿಗ್ನಾಕನ ಒಪ್ಪಿಗೆ ಪಡೆದು ಹೆಸರಿಟ್ಟ. ಗ್ಯಾಡೊಲಿನಿಯಮ್ ಇತರ ದೃಷ್ಟಿಯಿಂದ ವಾಣಿಜ್ಯ ದೃಷ್ಟಿಯಿಂದ ಅದನ್ನು ಮಾನೋಜೈಟಿನಿಂದ ಪ್ರಧಾನವಾಗಿ ಪಡೆಯಲಾಗುತ್ತಿದೆ. ಬ್ಯಾಸ್ಟ್ನಸೈಟ್, ಗ್ಯಾಡೊಲಿನೈಟ್, ಗ್ಸಿನೊಟೈಮ್ ಮತ್ತು ಯುಕ್ಸಿನೈಟುಗಳು ಇದರ ಇತರ ಮುಖ್ಯ ಅದುರುಗಳು. ಪರಮಾಣು ವಿದಳನೆಯ ಉತ್ಪನ್ನಗಳಲ್ಲಿಯೂ ಗ್ಯಾಡೊಲಿನಿಯಮ್ ದೊರೆಯುತ್ತದೆ. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಇದನ್ನು ಮುಖ್ಯವಾಗಿ ಅಂಶಿಕ ಸ್ಫಟಿಕೀಕರಣದ ಮೂಲಕ ಶುದ್ಧೀಕರಿಸುತ್ತಿದ್ದರು. ಈಗ ಅಯಾನು ವಿನಿಮಯ ವಿಧಾನಗಳನ್ನು ಅಳವಡಿಸಿಕೊಂಡು ಉತ್ಪಾದಿಸುತ್ತಾರೆ. 30% ನೈಟ್ರಿಕ್ ಆಮ್ಲದಲ್ಲಿನ ಗಾಡೊಲಿನಿಯಮ್ ನೈಟ್ರೇಟನ್ನು ಸ್ಫಟಿಕೀಕರಿಸುವುದರಿಂದ ಈ ಲೋಹದ ಸಂಯುಕ್ತಗಳನ್ನು ಇತರ ಲ್ಯಾಂಥನೈಡುಗಳಿಂದ ಪ್ರತ್ಯೇಕಿಸಬಹುದು. ನಿರ್ಜಲ ಗ್ಯಾಡೊಲಿನಿಯಮ್ ಕ್ಲೋರೈಡನ್ನು ಕ್ಯಾಲ್ಸಿಯಮಿನಿಂದ ಉಷ್ಣಾಪಕರ್ಷಿಸಿ ಲೋಹವನ್ನು ತಯಾರಿಸಬಹುದು. ಗ್ಯಾಡೊಲಿನಿಯಮ್, ಪೊಟ್ಯಾಸಿಯಂ ಮತ್ತು ಲಿಥಿಯಮ್ ಕ್ಲೋರೈಡುಗಳ ಮಿಶ್ರಣವನ್ನು ವಿದ್ಯದ್ವಿಶ್ಲೇಷಿಸಿ 98.4% ಶುದ್ಧವಾಗಿರುವ ಗ್ಯಾಡೊಲಿನಿಯಮ್ ಲೋಹವನ್ನು ಪಡೆಯಲಾಗಿದೆ. ಹೀಗೆ ಪಡೆದ ಮಿಶ್ರÀಲೋಹವನ್ನು ಕ್ವಾಟ್ರ್ಜ್ ನಳಿಗೆಯಲ್ಲಿ ಶುದ್ಧ ಗ್ಯಾಡೊಲಿನಿಯಮ್ ಲೋಹವನ್ನು ಪಡೆಯಬಹುದು.

1ಏ( - 2720 ಸೆ.) ಗಿಂತಲೂ ಕಡಿಮೆ ಉಷ್ಣತೆ ಪಡೆಯುವ ಅತ್ಯಂತ ಶೀತಾವಸ್ಥೆಯ ಅಧ್ಯಯನದ ಪ್ರಾರಂಭದಲ್ಲಿ ಉಪಯೋಗಿಸಿದ್ದು ಗ್ಯಾಡೊಲಿನಿಯಮ್ ಲವಣಗಳನ್ನು. ಪ್ರಕೃತಿಯಲ್ಲಿ ದೊರೆಯುವ ಧಾತುಗಳಲ್ಲೆಲ್ಲ ಉಷ್ಣನ್ಯೂಟ್ರಾನುಗಳನ್ನು ಅತಿ ಹೆಚ್ಚು ಹೀರುವ ಕೊಯ್ತ ಇದಕ್ಕಿದೆ. ಈ ಗುಣಕ್ಕಾಗಿಯೇ ಇದನ್ನು ಪರಮಾಣು ರಿಯಾಕ್ಟರುಗಳಲ್ಲಿ ನಿಯಂತ್ರಕ ರಾಳವಾಗಿ ಉಪಯೋಗಿಸುವ ಸಾಧ್ಯತೆ ಉಂಟು. ಇದರ ವಿಶಾಲ ಕೊಯ್ತಕ್ಕೆ 155 ಉಜ ಮತ್ತು 157 ಉಜ  ಐಸೋಟೊಪುಗಳೇ ಕಾರಣ. ಅವು ಉಷ್ಣನ್ಯೂಟ್ರಾನುಗಳನ್ನು ಹೀರಿಕೊಂಡು ಕ್ರಮವಾಗಿ 156 ಉಜ ಮತ್ತು 158ಉಜ ಐಸೋಟೋಪುಗಳಾಗಿ ಪರಿವರ್ತಿವಾಗುವವು. ವಿಶೇಷ ಎಲೆಕ್ಟ್ರಾನ್ ಉಪಕರಣಗಳಲ್ಲಿ, ಹೆಚ್ಚು ಉಷ್ಣತೆಯ ಉಷ್ಣನಿರೋಧಕಗಳಲ್ಲಿ, ಅತಿ ಶೀತಾವಸ್ಥೆಯನ್ನು ಅಧ್ಯಯನದಲ್ಲಿ ಮತ್ತು ಮಿಶ್ರ ಲೋಹಕಾರಕವಾಗಿ ಗ್ಯಾಡೊಲಿನಿಯಮನ್ನು ಉಪಯೋಗಿಸುತ್ತಾರೆ.
(ನೋಡಿ- ಲ್ಯಾಂಥನೈಡುಗಳು)
(ನೋಡಿ- ವಿರಳ-ಭಸ್ಮಧಾತುಗಳು)
(ಪಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ